ಮಿಂಚು ಹುಳು
ಚಂದ್ರನ ಮೋಹಿಸಿದ
ಹುಳುಗಳು
ಬೆಳಕಿನ ಬಸಿರು ಹೊತ್ತಿವೆ.
~
ಬೆಂಕಿಯಿಲ್ಲದ
ಬೆಳಕು,
ಬುದ್ಧನಿಗೆ ಖುಷಿಯಾಗಿದೆ.
ಜೀವದ ಹಣತೆಗಳು
ಬೆಳಕು ಹೊತ್ತು
ಹಾರಿವೆ!
~
ಅಗೋ!
ಬೆಳಕಿನ ಹನಿಗೆ
ರೆಕ್ಕೆ ಮೂಡಿದೆ!!
~
ಕತ್ತಲಲ್ಲಿ
ಸೂರ್ಯನ ಕಣ್ಣೀರು,
ಮೈದಳೆಯಿತು
ಮಿಂಚುಹುಳು.
~
ನಕ್ಷತ್ರಗಳಿಗೆ
ಮಣ್ಣ ಮೋಹ,
ಶಾಪಕ್ಕೆ ಹುಳುವಾದವು!
~
ಬೆನ್ನಲ್ಲಿ ಬೆಳಕು,
ಮಿಂಚುಹುಳು
ದಾರಿತಪ್ಪುತ್ತಿದೆ.
~
ಅವಳ ಕಣ್ಣ
ಹೊರಳಿನೆದುರು
ಮಿಂಚುಹುಳು
ಮಂಕಾಯಿತು!
~
ಮಿಂಚುಹುಳುಗಳ
ಕುಲುಕುತ್ತ ಹುಡುಗಿ
ಪಗಡೆಯಾಡಿದಳು.
ಬೆಳಕಿನ ಬೆರಗಿಗೆ
ಹುಡುಗ
ಸೋತುಹೋದ!

ಯಾವ ಹುಡುಗ ಸೋತನೋ ಗೊತ್ತಿಲ್ಲ, ಆದರೆ ನಾನಂತೂ ಬ್ಲಾಗಿನ ತುಂಬೆಲ್ಲಾ ಹಾಡು ಹಗಲಲ್ಲೇ ಹಾಡುತ್ತಾ ಹಾರಾಡುವ ಈ ಅದ್ಭುತ ಮಿಂಚುಹುಳುಗಳನ್ನೂ, ಅವುಗಳ ಬೆಳಕನ್ನೂ ನೋಡಿ ಬೆಕ್ಕಸ ಬೆರಗಾದೆ…!!
aa minchu hulugalella ninne nammanege bandidvu…… nimmanna sikkapatte hogaltidvu ivre..
ಚನ್ನಾಗಿದೆ.
ಬೆಳಕುಹುಳಗಳ ಮಿಂಚಿನ ಹನಿಗಳು
haaayku… Odalu thumbaa laayku…