~ ಅವನು ~
ಅಂವ
ಗೊಮ್ಮಟನಂತೆ
ದಿಗಂಬರ.
ಎಳ್ಳಷ್ಟೂ ಕಪಟ ಹೊದ್ದಿಲ್ಲ.
~
ಅಮಾವಾಸ್ಯೆ
ನನಗೆ ಗೊತ್ತಿಲ್ಲ.
ಮಗ್ಗುಲಲ್ಲಿ
ನಗುವ ಚಂದ್ರನಿದ್ದಾನೆ.
~
ಜಲತರಂಗದ
ಸದ್ದು!
ಅವನೆಲ್ಲೋ
ಮಾತಾಡುತ್ತಿರಬೇಕು…
~
ಸೂರ್ಯನಂಥ ಹುಡುಗ.
ಒಂದು ಕಡೆ ಮುಳುಗುತ್ತಾನೆ,
ಒಂದು ಕಡೆ ಬೆಳಗುತ್ತಾನೆ.
~
ಖುಷಿಯ ಭಂಗಿ
ಕುಡಿದಿರಬೇಕು,
ನಿದ್ದೆಯಲ್ಲೂ ನಗುತ್ತಿದ್ದಾನೆ!
~
ಇಲ್ಲೀಗ ಇರುಳು.
ಗೊತ್ತು ನನಗೆ,
ಸೂರ್ಯ
ಕಾಣದೂರಲ್ಲಿ ಉರಿಯುತ್ತಿದ್ದಾನೆ.
~
ತಾನು ಬುದ್ಧನ ಕೂಸು
ಅನ್ನುತ್ತಾನೆ,
ಜತೆಗಿರದೆ ಹಿಂಸಿಸುತ್ತಾನೆ!
~
ಕಣ್ಣಲ್ಲಿ
ದೀಪ ಹೊತ್ತ ಹುಡುಗ,
ಎದೆಗೆ
ಕಿಚ್ಚು ಹಚ್ಚುತ್ತಿದ್ದಾನೆ…
~
‘ಬೇಡ ಹೋಗೇ’
ಅನ್ನುವ ಹುಲಿ,
ಬೆಕ್ಕಿನಂತೆ
ಕಾಲು ಸುಳಿಯುತ್ತಿದೆ!
~

ಆಹಾ..!
ಇದೇನು ಸಾಲುಗಳ ಹೆಸರಲ್ಲಿ ಮಿಂಚುಗಳನ್ನೇ ಪೋಣಿಸಿದಂತಿದೆಯಲ್ಲ!!
ರಿಯಲಿ ವಂಡರ್ ಫುಲ್ ಮಿಂಚುಗಳು..!!!
ಓಹ್! ತುಂಬಾ ತುಂಬ ಥ್ಯಾಂಕ್ಸ್.
ಬಹಳ ಚೆಂದ ಬರೆಯುವ ನಿಮ್ಮ ಮೆಚ್ಚುಗೆ ನನಗೆ ಖುಷಿ.
“ಹೌದು,ಬಿಡಿ ಇವು ಸುಮ್ಮನೇ ಬರೆದ ಸಾಲುಗಳಲ್ಲ.
ಥಟ್ಟನೆ ಹೊಳೆದ ಕೋಲ್ಮಿಂಚಲ್ಲ,
ಮರೆತೇನಂದರೂ ಮರೆಯುವ ಸಾಲುಗಳಲ್ಲ.” ಹೆಜ್ಜೇನಿಗಿಂತ..ಸಿಹಿ ಜೇನು ರುಚಿ ಅಲ್ವಾ..? ಹಾಗನ್ನಿಸಿತು ಈ ತುಂತುರ ಹನಿಗಳನ್ನ ಓದಿ.
-ನಾಗು,ತಳವಾರ್.
ಎಲ್ಲಾ ಸಾಲುಗಳೂ ಅದ್ಭುತವಾಗಿವೆ. ಹಾಯ್ಕುವಿನಂತೆ ಕಾಣುವ ಸಾಲುಗಳು ಮಿಂಚಿನಂತೆ ಹೊಳೆಯುತ್ತದೆ.. ದೀಪದಂತೆ ಉಳಿಯುತ್ತದೆ.
ಬಹಳ ಬಹಳ ಇಷ್ಟವಾದವು.
TalavAr, ranjit ,
mechchugege dhanyavAda…
- nalme,
Maitri
ಅಬ್ಬ… ಇಲ್ಲಿರುವ ಇಷ್ಟು ಹುವುಗಳಲ್ಲಿ ಯಾವ ಹೂವು ತಗೊಳ್ಳಿ ಅಂತ ಆಸೆ ಆಗ್ತ ಇದೆ..ಎಲ್ಲವು ಅದ್ಭುತ ಮತ್ತೆ ಅತ್ಯದ್ಭುತ ! ಮೊದಲ ಸಲ ಇಲ್ಲಿಗೆ ಬಂದಿದ್ದು..ಇನ್ ಮೇಲೆ ಬರ್ತಾನೆ ಇರ್ಬೇಕು ಅನ್ನಿಸ್ತಿದೆ !
ನೀವು ನನ್ನ ಫೆವೊರಿಟ
ಚನ್ನಾಗಿವೆ @)_@)
ನವಿಲುಗರಿ ಸೋಮನಂತೆ ನಾನೂ ಈ ಎಲ್ಲಾ ಹಾಯ್ಕುಗಳ ಫ್ಯಾನ್ ಆಗಿದ್ದೇನೆ,
ಮತ್ತಷ್ಟು ಬರೆಯಿರಿ..:)
ಎಲ್ರಿಗೂ ಥ್ಯಾಂಕ್ಸ್…
ನಿಮ್ಮೆಲ್ಲರ ಮೆಚ್ಚುಗೆ ನನಗೆ ಖುಶಿ!!
ಮೈತ್ರಿ
sumne bardiddoo ondsala haaki